ಬ್ರಹ್ಮಾವರ ಮಾ.11 : ತಾಲೂಕಿನ ಉಪ್ಪೂರು ಗ್ರಾಮದ ನರ್ನಾಡು ಎಂಬಲ್ಲಿನ ರೈಲ್ವೆ ಟ್ರ್ಯಾಕ್ ನಲ್ಲಿ ರೈಲು ಡಿಕ್ಕಿ ಹೊಡೆದು ಮೃತಪಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ರೈಲ್ವೆ ಇಲಾಖೆಯ ಟ್ರಾಕ್ ಮೆಂಟೇನರ್ ರಾಘವೇಂದ್ರ ಇವರು ಕರ್ತವ್ಯದಲ್ಲಿದ್ದ ವೇಳೆ ಉಡುಪಿ ರೈಲ್ವೆ ಸ್ಟೇಷನ್ ಮಾಸ್ಟರ್ ಟ್ರಾಕ್ ಮೆನ್ ನಾಗರಾಜ ಅವರು ಕರೆ ಮಾಡಿ, ಉಪ್ಪೂರು ಗ್ರಾಮದ ನರ್ನಾಡು ಎಂಬಲ್ಲಿನ ರೈಲ್ವೆ ಟ್ರ್ಯಾಕ್ ನಲ್ಲಿ ರೈಲು ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿಯ ಮೃತಪಟ್ಟಿರುವುದಾಗಿ ತಿಳಿಸಿದಂತೆ, ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ, 40 ರಿಂದ 45 ವರ್ಷದ ಅಪರಿಚಿತ ಗಂಡಸಿನ ಮೃತ ದೇಹ ಇದಾಗಿದ್ದು, ಶರೀರ ರೈಲ್ವೆ ಟ್ರಾಕ್ ನ ಬದಿಯಲ್ಲಿ ಬಿದ್ದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ದೇಹ ಸಂಪೂರ್ಣ ಜಜ್ಜಿ ಹೋಗಿದ್ದು, ಗುರುತು ಪತ್ತೆಯಾಗಿಲ್ಲ. ಈ ವ್ಯಕ್ತಿಯು ರೈಲಿಗೆ ಅಡ್ಡ ಬಂದು ಡಿಕ್ಕಿ ಹೊಡೆದು ಎಸೆಯಲ್ಪಟ್ಟು ಆದ ಗಾಯದಿಂದ ಮೃತ ಪಟ್ಟಿರುವುದಾಗಿ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.